11 October 2024

RRB Technician Form Correction 2024

Spread the love

ಆತ್ಮಿಯ ಸ್ಪರ್ಧಾ ಮಿತ್ರರೇ ಯಾರೆಲ್ಲಾ RRB Technician ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ್ದಿರಿ ಅದರಲ್ಲಿ ಕೆಲ ಅಭ್ಯರ್ಥಿಗಳು ಅರ್ಜಿಯಲ್ಲಿ ಸರಿಯಾದ ಫೋಟೊ ಹಾಗೂ ಸಹಿ ಅಪಲೋಡ್ ಮಾಡಿಲ್ಲಾ ಹಾಗಾಗಿ ರೈಲ್ವೆ ಇಲಾಖೆ ಈಗ ಅವರಿಗೆ ಅವಕಾಶ ನೀಡುತ್ತಿದೆ.

ಸರಿಯಾದ ಫೋಟೊ ಹಾಗೂ ಸಹಿ ಅಪಲೋಡ್ ಮಾಡದ ಅಭ್ಯರ್ಥಿಗಳ ಮೊಬೈಲ್ ಸಂಖ್ಯೆಗೆ ಹಾಗೂ ಇಮೇಲ್ ಗೆ ರೈಲ್ವೆ ಇಲಾಖೆ ಸಂದೇಶ ರವಾನಿಸಲಿದೆ.

ಅಂತಹ ಅಭ್ಯರ್ಥಿಗಳು ಮಾತ್ರ ಪುನಃ ನಿಮ್ಮ ಸರಿಯಾದ ಫೋಟೊ ಹಾಗೂ ಸಹಿ ಅಪಲೋಡ್ ಮಾಡಿ. ಮತ್ತು ನಿಮ್ಮ ಎಲ್ಲಾ ಹೆಸರು ನಿಮ್ಮ ತಂದೆಯ ಹೆಸರು ಸರಿಯಾಗಿ ನೋಡಿ ಸಬ್ಮೆಟ್ ಮಾಡಿ ಅವಸರ ಮಾಡಬೇಡಿ

ಅರ್ಜಿ ಸಲ್ಲಿಸುವ್ ದಿನಾಂಕ:03/06/2024


ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:07/06/2024

ಭಾರತದ ರೈಲು ಮಾಹಿತಿ:

ಭಾರತದ ಮೊದಲ ರೈಲುವು ರೆಡ್ ಹಿಲ್ಸ್ ನಿಂದ 1837 ರಲ್ಲಿ ಚಿಂತದ್ರಿಪೆಟ್ ಸೇತುವೆಗೆ ಓಡಿತು. ಇದನ್ನು ರೆಡ್ ಹಿಲ್ ರೈಲ್ವೇ ಎಂದು ಕರೆಯಲಾಗುತ್ತಿತ್ತು ಮತ್ತು ವಿಲಿಯಂ ಆವೆರಿಯವರು ತಯಾರಿಸಿದ ರೋಟರಿ ಆವಿ ಲೋಕೋಮೋಟಿವ್ ಅನ್ನು ಬಳಸಿದರು. ರೈಲ್ವೇ ಅನ್ನು ಸರ್ ಆರ್ಥರ್ ಕಾಟನ್ ನಿರ್ಮಿಸಿದ ಮತ್ತು ಮುಖ್ಯವಾಗಿ ಮದ್ರಾಸ್ನಲ್ಲಿ ರಸ್ತೆ-ನಿರ್ಮಾಣ ಕಾರ್ಯಕ್ಕಾಗಿ ಗ್ರಾನೈಟ್ ಕಲ್ಲುಗಳನ್ನು ಸಾಗಿಸಲು ಬಳಸಲಾಗುತ್ತಿತ್ತು.
1845 ರಲ್ಲಿ ರಾಜಮಂಡ್ರಿ ನಲ್ಲಿ ದೌಲೆಸ್ವರಮ್ ನಲ್ಲಿ ಗೋದಾವರಿ ಅಣೆಕಟ್ಟು ನಿರ್ಮಾಣ ರೈಲ್ವೆವನ್ನು ಕಾಟನ್ ನಿರ್ಮಿಸಿದರು, ಇದು ಗೋದಾವರಿ ಮೇಲೆ ಅಣೆಕಟ್ಟು ನಿರ್ಮಾಣಕ್ಕಾಗಿ ಕಲ್ಲುಗಳನ್ನು ಸರಬರಾಜು ಮಾಡಲು ಬಳಸಲ್ಪಟ್ಟಿತು.
1851 ರಲ್ಲಿ ಸೊಲೊನಿ ಅಕ್ವೆಡ್ಯೂಕ್ಟ್ ರೈಲ್ವೆ ಅನ್ನು ರೂರ್ಕಿ ನಲ್ಲಿ ನಿರ್ಮಿಸಲಾಯಿತು, ಬ್ರಿಟಿಷ್ ಅಧಿಕಾರಿಯ ಹೆಸರಿನ “ಥಾಮಸೊನ್” ಎಂಬ ಉಗಿ ಇಂಜಿನ್ ಮೂಲಕ ಸಾಗಿಸಲಾಯಿತು. ಸೊಲೈನಿ ನದಿಗೆ ಕಾಲುವೆಗೆ ನಿರ್ಮಾಣ ಸಾಮಗ್ರಿಗಳನ್ನು ಸಾಗಿಸಲು ಇದನ್ನು ಬಳಸಲಾಯಿತು.
ಬಾಂಬೆ ಸರ್ಕಾರದ ಮುಖ್ಯ ಇಂಜಿನಿಯರ್‌ ಜಾರ್ಜ್‌ ಕ್ಲಾರ್ಕ್‌ ಕಲ್ಪನೆ ಕೂಸಾಗಿದ್ದ ಮೊದಲ ರೈಲು 1853ರಲ್ಲಿ ಮುಂಬಯಿ–ಠಾಣೆ ನಡುವೆ 21 ಮೈಲು ಸಂಚಾರ ನಡೆಸಿತು.
ಮುಂಬಯಿನ ಬೋರಿ ಬಂದರ್‌¬ನಿಂದ 14 ಬೋಗಿಗಳಲ್ಲಿ 400 ಅತಿಥಿಗಳನ್ನು ಹೊತ್ತ ರೈಲು ಏಪ್ರಿಲ್ 16ರಂದು ಮಧ್ಯಾಹ್ನ 3.30ಕ್ಕೆ ಸಂಚಾರ ಆರಂಭಿಸಿತು. ಅದರ ಸ್ಮರಣಾರ್ಥ 21 ಕುಶಾಲ ತೋಪು ಹಾರಿಸಲಾಗಿತ್ತು. ಸಾರ್ವಜನಿಕರಿಗೆ ಪ್ರಯಾಣಕ್ಕೆ ಈ ರೈಲಿನಲ್ಲಿ ಅವಕಾಶ ಇರದ ಕಾರಣ ಭಾರತದ ಮೊತ್ತ ಮೊದಲ ಪ್ರಯಾಣಿಕರ ರೈಲು ಎಂಬ ಪಟ್ಟದಿಂದ ಇದು ವಂಚಿತವಾಯಿತು.
1854ರ ಆಗಸ್ಟ್‌ 15ರಂದು ಕೋಲ್ಕತ್ತದ ಹೌರಾ ನಿಲ್ದಾಣದಿಂದ ಹೂಗ್ಲಿಗೆ 24 ಮೈಲು ಸಂಚರಿಸಿದ ಈಸ್ಟ್‌ ಇಂಡಿಯಾ ಕಂಪೆನಿಯ ರೈಲು ಭಾರತದ ಮೊದಲ ಪ್ರಯಾಣಿಕರ ರೈಲು ಎಂದು ಇತಿಹಾಸದಲ್ಲಿ ದಾಖಲಾಗಿದೆ.
ಅದಾದ ಎರಡು ವರ್ಷಗಳ ನಂತರ ದಕ್ಷಿಣ ಭಾರತದಲ್ಲಿ ಮೊದಲ ಬಾರಿಗೆ ಮದ್ರಾಸ್‌ನಲ್ಲಿ ರೈಲು ಸಂಚಾರ ಆರಂಭವಾಯಿತು. 1856ರಲ್ಲಿ ಮದ್ರಾಸ್ ರೈಲು ಕಂಪೆನಿ ಪ್ರಯಾಣಿಕರ ರೈಲು ವೇಸರಪಾಂಡಿ– ಅರ್ಕಾಟ್‌ ನಡುವೆ 63 ಮೈಲು ಸಂಚರಿಸಿತು.
ಇದಾದ ಮೂರು ವರ್ಷಗಳ ನಂತರ ಅಂದರೆ 1859ರಲ್ಲಿ ಉತ್ತರ ಭಾರತ¬ದಲ್ಲಿ ಮೊದಲ ರೈಲು ಸಂಚರಿಸಿತು. ಮಾರ್ಚ್‌ 3ರಂದು ಅಲಹಾಬಾದ್‌–ಕಾನ್ಪುರ ನಡುವೆ ಈ ರೈಲು 119 ಮೈಲು ಸಂಚರಿಸಿತು.
1875ರ ಅಕ್ಟೋಬರ್‌ 19ರಂದು ಹಥ್ರಾಸ್‌ ರಸ್ತೆಯಿಂದ ಮಥುರಾ ದಂಡು ರೈಲು ನಿಲ್ದಾಣಕ್ಕೆ ಸಂಚರಿಸಿದ ರೈಲು ಪಶ್ಚಿಮ ಭಾರತದ ಮೊದಲ ರೈಲು ಎಂಬ ಹೆಗ್ಗಳಿಕೆ ಪಡೆದಿದೆ.

ನಾಗರೀಕರ ಸೌಲಭ್ಯಕ್ಕಾಗಿ, ಅನೇಕ ನಗರಗಳಲ್ಲಿ ಲೋಕಲ್ ರೈಲುಗಳ ವ್ಯವಸ್ಥೆಯನ್ನು ಮಾಡಲಾಗಿದೆ. ಮುಂಬಯಿ, ಚೆನ್ನೈ,ಕೊಲ್ಕತ್ತಾ,ಹೈದರಾಬಾದು,ಪುಣೆ ನಗರಗಳಲ್ಲಿ ಈ ರೈಲುಗಳನ್ನು ನೋಡಬಹುದು. ಇದೇ ಉದ್ದೇಶದಿಂದ , ನವದೆಹಲಿಯಲ್ಲಿ ಮೆಟ್ರೋ ರೈಲು ಪದ್ಧತಿಯನ್ನು 1990ರ ದಶಕದಲ್ಲಿ ಪ್ರಾರಂಭಿಸಲಾಗಿದೆ. ಹೈದರಾಬಾದು ಮತ್ತು ಪುಣೆಯಲ್ಲಿ ಸ್ವತಂತ್ರ ಲೋಕಲ್ ಹಳಿಗಳು ಇಲ್ಲದಿದ್ದರೂ ಲೋಕಲುಗಳು ದೂರ ರೈಲುಗಳ ಹಳಿಯನ್ನೇ ಉಪಯೋಗಿಸುತ್ತವೆ. ನವ ದೆಹಲಿ, ಚೆನ್ನೈ ಮತ್ತು ಕೊಲ್ಕತ್ತಾ ನಗರಗಳಲ್ಲಿ ಮೆಟ್ರೋ ರೈಲು ಸೌಲಭ್ಯ ಇದೆ.

ಲೋಕಲ್ ರೈಲಿನ ಎಂಜಿನ್ ವಿದ್ಯುಚ್ಛಕ್ತಿಯ ಬಲದಿಂದ ನಡೆಯುತ್ತದೆ. ಜನ ಜಂಗುಳಿಯ ಸಮಯದ ಸಂಚಾರವನ್ನು ನಿಭಾಯಿಸಲು ಒಂದೊಂದು ಎಂಜಿನ್ನಿಗೆ ಒಂಭತ್ತು ಅಥವಾ ಹನ್ನೆರಡು ಕೋಚುಗಳನ್ನು ಜೋಡಿಸಲಾಗಿರುತ್ತದೆ. ವಿದ್ಯುತ್ ಬಹು ಘಟಕ (ಇಎಮ್‍ಯು) ಟ್ರೈನಿನ ಒಂದು ಘಟಕ ಒಂದು ವಿದ್ಯುತ್ ಬಂಡಿ ಮತ್ತು ಎರಡು ಸಾಮಾನ್ಯ ಕೋಚ್‍ಗಳನ್ನು ಹೊಂದಿರುತ್ತದೆ. ಹೀಗೆ ಒಂಬತ್ತು ಡಬ್ಬಿಯ ಇಎಮ್‍ಯು ಪ್ರತಿ ತುದಿಯಲ್ಲಿ ಒಂದು ವಿದ್ಯುತ್ ಡಬ್ಬಿ ಮತ್ತು ಮಧ್ಯದಲ್ಲಿ ಮತ್ತೊಂದು ಡಬ್ಬಿಯನ್ನು ಹೊಂದಿರುವ ಮೂರು ಘಟಕಗಳಿಂದ ರಚಿತವಾಗಿರುತ್ತದೆ. ಮುಂಬಯಿಯಲ್ಲಿನ ಡಬ್ಬಿಗಳ ಸಮೂಹಗಳು ಏಕಮುಖ ಪ್ರವಾಹದಿಂದ ಚಾಲಿತವಾಗಿರುತ್ತವೆ, ಅದೇ ಇತರೆಡೆಗಳ ಸಮೂಹಗಳು ಪರ್ಯಾಯ ಪ್ರವಾಹವನ್ನು ಬಳಸುತ್ತವೆ. ಒಂದು ಸಾಮಾನ್ಯ ರೈಲುಡಬ್ಬಿ ೯೬ ಕುಳಿತ ಪ್ರಯಾಣಿಕರಿಗೆ ಸ್ಥಳಮಾಡಿಕೊಡಲು ವಿನ್ಯಾಸಗೊಂಡಿರುತ್ತದೆ, ಆದರೆ ಜನಜಂಗುಳಿಯ ಸಮಯದಲ್ಲಿ ನಿಂತವರನ್ನು ಸೇರಿಸಿದರೆ ಪ್ರಯಾಣಿಕರ ನಿಜವಾದ ಸಂಖ್ಯೆ ಸುಲಭವಾಗಿ ದುಪ್ಪಟ್ಟು ಅಥವಾ ಮೂರು ಪಟ್ಟು ಆಗಿರಬಹುದು. ಕೋಲ್ಕಟಾ ಮೆಟ್ರೊ ವಲಯ ರೈಲ್ವೆಯ ಆಡಳಿತ ಸ್ಥಾನವನ್ನು ಹೊಂದಿದೆ, ಆದರೆ ಅದು ಹದಿನೇಳು ರೈಲ್ವೆ ವಲಯಗಳ ಅಡಿಯಲ್ಲಿ ಬರುವುದಿಲ್ಲ.

ಮುಂಬಯಿಯಲ್ಲಿನ ಉಪನಗರ ಟ್ರೈನುಗಳು ಭಾರತದಲ್ಲಿನ ಇತರ ಯಾವುದೇ ಉಪನಗರ ಜಾಲಕ್ಕಿಂತ ಹೆಚ್ಚು ನೂಕುನುಗ್ಗಲನ್ನು ನಿಭಾಯಿಸುತ್ತವೆ. ಈ ಜಾಲ ಮೂರು ಮಾರ್ಗಗಳನ್ನು ಹೊಂದಿದೆ, ಪಶ್ಚಿಮ, ಮಧ್ಯ ಮತ್ತು ಬಂದರು. ಅದನ್ನು ಮುಂಬಯಿಯ ಜೀವನಾಡಿಯೆಂದು ಪರಿಗಣಿಸಲಾಗುತ್ತದೆ. ೧೧ ಜುಲೈ ೨೦೦೬ರಂದು, ಈ ಟ್ರೈನುಗಳಲ್ಲಿ ಆರು ಬಾಂಬುಗಳನ್ನು ಸಿಡಿಸಲಾಯಿತು ಮತ್ತು ಇದರ ಗುರಿ ಸಾರ್ವಜನಿಕರಾಗಿದ್ದರು.

ಭಾರತೀಯ ರೈಲ್ವೆಯು ಪ್ರಯಾಣಿಕರಿಗಾಗಿ ಪ್ರತಿದಿನ 8,072 ರೈಲುಗಳನ್ನು ಓಡಿಸುತ್ತಿದ್ದು, ಭಾರತದ ಇಪ್ಪತ್ತೈದು ರಾಜ್ಯಗಳು ಹಾಗೂ ಮೂರು ಕೇಂದ್ರಾಡಳಿತ ಪ್ರದೇಶಗಳ ವ್ಯಾಪ್ತಿಯಲ್ಲಿ ಸುಮಾರು ಐನೂರು ಕೋಟಿಗೂ ಹೆಚ್ಚು ಪ್ರಯಾಣಿಕರನ್ನು ಪ್ರತಿವರ್ಷ ಸಾಗಿಸುತ್ತದೆ. ಭಾರತೀಯ ರೈಲ್ವೆ ಜಾಲವು ಸಿಕ್ಕಿಮ್ , ಅರುಣಾಚಲ ಪ್ರದೇಶ ಮತ್ತು ಮೇಘಾಲಯ ರಾಜ್ಯಗಳಲ್ಲಿ ಇಲ್ಲಿಯವರೆಗೂ ಪ್ರವೇಶ ಮಾಡಿಲ್ಲ.ರೈಲು ಭಾರತದ ಜನತೆಯ ಜನಪ್ರಿಯ ಪ್ರವಾಸ ಮಾಧ್ಯಮವಾಗಿದೆ.

ಸಾಧಾರಣ ರೈಲಿನಲ್ಲಿ 18 ಕೋಚುಗಳಿದ್ದರೂ, ಕೆಲವೊಂದು ಜನಪ್ರಿಯ ರೈಲುಗಳಲ್ಲಿ 24ರವರೆಗೂ ಕೋಚುಗಳು ಇರುವುದುಂಟು. ಪ್ರತಿಯೊಂದು ಕೋಚು 18ರಿಂದ 72 ಪ್ರಯಾಣಿಕರಿಗಾಗಿ ವಿನ್ಯಾಸ ಮಾಡಿದ್ದರೂ , ಶಾಲಾ ರಜಾ ದಿನಗಳಲ್ಲಿ ಮತ್ತು ಬಿರುಸಿನ ಚಟುವಟಿಕೆಗಳ ಮಾರ್ಗಗಳಲ್ಲಿ ಜನದಟ್ಟಣೆಯು ಇದರ ಅನೇಕ ಪಟ್ಟು ಹೆಚ್ಚಿರುವುದನ್ನು ಕಾಣಬಹುದು. ಬಳಕೆಯಲ್ಲಿರುವ ಕೋಚುಗಳು ಕೊನೆಯಲ್ಲಿ ಪ್ರವೇಶದ್ವಾರ ಹೊಂದಿರುತ್ತವೆ, ಆದರೆ ಕೆಲವು ಟ್ರೈನುಗಳಲ್ಲಿ ಇವುಗಳಲ್ಲಿ ಕೆಲವನ್ನು ಕಾರ್ಯಾಚರಣಾ ಕಾರಣಗಳಿಗಾಗಿ ಮುಚ್ಚಿರಬಹುದು. ಸರಕು ಟ್ರೈನುಗಳು ಬಹಳ ವೈವಿಧ್ಯದ ಬಂಡಿಗಳನ್ನು ಬಳಸುತ್ತವೆ.

ಪ್ರತಿ ಕೋಚು ಭಿನ್ನ ವಸತಿ ವರ್ಗವನ್ನು ಹೊಂದಿರುತ್ತದೆ; ಸ್ಲೀಪರ್ ವರ್ಗ ಅತ್ಯಂತ ಜನಪ್ರಿಯವಾದದ್ದು. ಈ ಪ್ರಕಾರದ ಒಂಬತ್ತು ಕೋಚುಗಳನ್ನು ಸಾಮಾನ್ಯವಾಗಿ ಜೊತೆಗೂಡಿಸಲಾಗುತ್ತದೆ. ಹವಾನಿಯಂತ್ರಿತ ಕೋಚುಗಳನ್ನು ಲಗತ್ತಿಸಲಾಗುತ್ತದೆ, ಮತ್ತು ಒಂದು ಸಾಮಾನ್ಯ ಟ್ರೈನು ಮೂರರಿಂದ ಐದು ಹವಾನಿಯಂತ್ರಿತ ಕೋಚುಗಳನ್ನು ಹೊಂದಿರಬಹುದು. ಆನ್‍ಲೈನ್ ಪ್ರಯಾಣಿಕ ಟಿಕೆಟ್ ನೀಡಿಕೆ ೨೦೦೪ರಲ್ಲಿ ಪರಿಚಯಿಸಲ್ಪಟ್ಟಿತು, ಮತ್ತು ೨೦೦೯ರ ವೇಳೆಗೆ ದಿನಕ್ಕೆ ೧೦೦,೦೦೦ಕ್ಕಿಂತ ಹೆಚ್ಚಾಗುವುದೆಂದು ನಿರೀಕ್ಷಿಸಲಾಗಿದೆ. ೨೦೦೭ರ ಅಂತ್ಯದ ವೇಳೆಗೆ ಅನೇಕ ನಿಲ್ದಾಣಗಳಲ್ಲಿನ ಎಟಿಎಂ ಗಳು ದೂರಮಾರ್ಗದ ಟಿಕೇಟುಗಳನ್ನು ಕೊಡಲು ಅಳವಡಿಸಲ್ಪಟ್ಟಿರುತ್ತವೆ.

ಖನಿಜಗಳು, ಗೊಬ್ಬರ, ರಾಸಾಯನಿಕಗಳು, ತೈಲೋತ್ಪನ್ನಗಳು, ಕೃಷಿ ಉತ್ಪನ್ನಗಳು, ಕಬ್ಬಿಣ ಮತ್ತು ಉಕ್ಕು ಇವೇ ಮೊದಲಾದ ತರಹಾವಿ ಸರಕುಗಳನ್ನು ಭಾರತೀಯ ರೈಲು ಸಾಗಿಸುತ್ತದೆ. ಬಂದರುಗಳು ಹಾಗೂ ದೊಡ್ಡ ನಗರಗಳಲ್ಲಿ ಸರಕು ಸಾಗಾಣಿಕೆಗಾಗಿಯೇ ರೈಲುಹಳಿ, ಯಾರ್ಡು ಇತ್ಯಾದಿ ವ್ಯವಸ್ಥೆಯನ್ನು ಮಾಡಲಾಗಿದೆ.

ಭಾರತೀಯ ರೈಲ್ವೆ ಅದರ ಆದಾಯದಲ್ಲಿ ಶೇಕಡ ೭೦ ಮತ್ತು ಅದರ ಲಾಭಗಳಲ್ಲಿ ಬಹುಪಾಲನ್ನು ಸರಕು ವಲಯದಿಂದ ಗಳಿಸುತ್ತದೆ, ಮತ್ತು ಈ ಲಾಭಗಳನ್ನು ನಷ್ಟ ಅನುಭವಿಸುವ ಪ್ರಯಾಣಿಕ ವಲಯಕ್ಕೆ ಸಹಾಯಧನ ನೀಡಲು ಬಳಸುತ್ತದೆ. ಆದರೆ, ಅಗ್ಗದ ದರಗಳನ್ನು ನೀಡುವ ಟ್ರಕ್‍ಗಳಿಂದ ಪೈಪೋಟಿಯ ಕಾರಣ ಇತ್ತೀಚಿನ ವರ್ಷಗಳಲ್ಲಿ ಸರಕು ಸಂಚಾರದಲ್ಲಿ ಇಳಿಕೆಯಾಗಿದೆ. ೧೯೯೦ರ ದಶಕದಿಂದ, ಭಾರತೀಯ ರೈಲ್ವೆ ಸಣ್ಣ ಸಾಗಾಣಿಕೆ ಸಾಮಾನುಗಳಿಂದ ದೊಡ್ಡ ಧಾರಕ ಸಾಗಣೆಗೆ ಬದಲಾಯಿಸಿಕೊಂಡಿದೆ, ಮತ್ತು ಇದರಿಂದ ಅದರ ಕಾರ್ಯಾಚರಣೆಗಳು ವೇಗಗೊಳ್ಳಲು ನೆರವಾಗಿದೆ. ಅದರ ಸರಕು ಆದಾಯಗಳ ಬಹುಪಾಲು ಕಲ್ಲಿದ್ದಲು, ಸಿಮೆಂಟ್, ಆಹಾರಧಾನ್ಯಗಳು ಮತ್ತು ಕಬ್ಬಿಣದ ಅದಿರಿನಂಥ ಬೃಹತ್ ಸರಕುಗಳನ್ನು ಸಾಗಿಸುವ ಅಂತಹ ಬಂಡಿ ಸಮೂಹದಿಂದ ಬರುತ್ತದೆ.

ಭಾರತೀಯ ರೈಲ್ವೆ ದೀರ್ಘ ಅಂತರಗಳ ನಡುವೆ ವಾಹನಗಳನ್ನೂ ಸಾಗಿಸುತ್ತದೆ. ಒಂದು ನಿರ್ದಿಷ್ಟ ಸ್ಥಳಕ್ಕೆ ಸರಕುಗಳನ್ನು ಸಾಗಿಸುವ ಟ್ರಕ್‍ಗಳನ್ನು ಟ್ರೈನುಗಳು ಹಿಂದಾರಿಯಲ್ಲಿ ಎಳೆಯುತ್ತವೆ ಮತ್ತು ಇದರಿಂದ ಟ್ರಕ್‍ನ ಕಂಪನಿಗಳು ಅನಗತ್ಯ ಇಂಧನ ವೆಚ್ಚಗಳನ್ನು ಉಳಿಸುತ್ತವೆ. ಶೈತ್ಯೀಕೃತ ವ್ಯಾನ್‍ಗಳು ಕೂಡ ಅನೇಕ ಪ್ರದೇಶಗಳಲ್ಲಿ ಲಭ್ಯವಿವೆ. ಹಸಿರು ವ್ಯಾನ್ ತಾಜಾ ಆಹಾರ ಮತ್ತು ತರಕಾರಿಗಳನ್ನು ಸಾಗಿಸಲು ಬಳಸಲಾಗುವ ಒಂದು ವಿಶೇಷ ಪ್ರಕಾರ. ಇತ್ತೀಚೆಗೆ ಭಾರತೀಯ ರೈಲ್ವೆ ಹೆಚ್ಚಿನ ಆದ್ಯತೆಯ ಸರಕಿಗಾಗಿ ವಿಶೇಷ ಕಂಟೇನರ್ ರಾಜ್‍ಧಾನಿ ಯನ್ನು ಪರಿಚಯಿಸಿತು. ಸರಕು ಟ್ರೈನ್‍ಗಾಗಿ ತಲುಪಲಾದ ಅತ್ಯಂತ ಹೆಚ್ಚಿನ ವೇಗ ೧೦೦ ಕಿ.ಮಿ/ಗಂಟೆಗೆ, ೪,೭೦೦ ಮೆಟ್ರಿಕ್ ಟನ್ ಭಾರಕ್ಕಾಗಿ.

ಇತ್ತೀಚಿನ ಬದಲಾವಣೆಗಳು ಸರಕಿನಿಂದ ಆದಾಯಗಳನ್ನು ಹೆಚ್ಚಿಸಲು ಪ್ರಯತ್ನಿಸಿವೆ. ಸರಕು ಟ್ರೈನುಗಳ ಸಾಮರ್ಥ್ಯವನ್ನು ಸುಧಾರಿಸಲು ಇತ್ತೀಚೆಗೆ ಒಂದು ಖಾಸಗೀಕರಣ ಯೋಜನೆಯನ್ನು ಪರಿಚಯಿಸಲಾಯಿತು. ಕಂಪನಿಗಳಿಗೆ ಅವುಗಳ ಸ್ವಂತ ಧಾರಕ ಟ್ರೈನುಗಳನ್ನು ಚಾಲನೆಮಾಡಲು ಅನುಮತಿ ನೀಡಲಾಗುತ್ತಿದೆ. ಭಾರತದ ಅತ್ಯಂತ ದೊಡ್ಡ ನಗರಗಳನ್ನು ಕೂಡಿಸುವ ೧೧,೦೦೦ ಕಿ.ಮಿ. ಸರಕು ಮಾರ್ಗದ ಮೊದಲ ಉದ್ದವನ್ನು ಇತ್ತೀಚೆಗೆ ಅನುಮೋದಿಸಲಾಗಿದೆ. ರೈಲ್ವೆಯು, ಈಗಾಗಲೇ ಆಗುತ್ತಿದ್ದುದನ್ನು ನ್ಯಾಯಬದ್ಧಗೊಳಿಸಿ, ವ್ಯವಸ್ಥೆಯ ೨೨೨,೦೦೦ ಸರಕು ಬಂಡಿಗಳ ಭಾರ ಮಿತಿಯನ್ನು ಶೇಕಡ ೧೧ ರಷ್ಟು ಹೆಚ್ಚಿಸಿದೆ. ಇಂಧನ ವೆಚ್ಚದ ಹೆಚ್ಚಳದಿಂದ ಏರಿಕೆಯಾದ ಭಾರತದಲ್ಲಿನ ತಯಾರಿಕಾ ಸಾಗಣೆಯಲ್ಲಿನ ಹೆಚ್ಚಳದ ಕಾರಣ, ರೈಲುಮಾರ್ಗದಿಂದ ಸಾಗಣೆ ಆರ್ಥಿಕವಾಗಿ ಅನುಕೂಲಕರವಾಗಿದೆ. ಹೋಗಿಬರುವ ಒಟ್ಟು ಸಮಯವನ್ನು ವೇಗಗೊಳಿಸುವಂಥ ಹೊಸ ಕ್ರಮಗಳು ಸರಕು ಆದಾಯಗಳಿಗೆ ಸುಮಾರು ಶೇಕಡ ೨೪ರಷ್ಟು ಸೇರಿಸಿವೆ.

ಈ ಜಾಲದಲ್ಲಿನ ದರಗಳು ವಿಶ್ವದಲ್ಲಿ ಅತ್ಯಂತ ಅಗ್ಗದ ದರಗಳಲ್ಲಿ ಸೇರಿವೆ. ರೈಲ್ವೆ ಬಜೆಟ್ ಅಸ್ತಿತ್ವದಲ್ಲಿರುವ ಟ್ರೈನು ಮತ್ತು ಮಾರ್ಗಗಳ ಒಳಸೇರಿಕೆ ಮತ್ತು ಸುಧಾರಣೆ, ಆಧುನೀಕರಣ ಮತ್ತು ಅತ್ಯಂತ ಮುಖ್ಯವಾಗಿ ಸರಕು ಹಾಗೂ ಪ್ರಯಾಣಿಕರ ಸಂಚಾರದ ಸುಂಕವನ್ನು ನಿಭಾಯಿಸುತ್ತದೆ. ಸಂಸತ್ತು ಬಜೆಟ್‍ನಲ್ಲಿ ಪ್ರಸ್ತಾಪಿಸಲಾದ ಕಾರ್ಯನೀತಿಗಳು ಮತ್ತು ಹಂಚಿಕೆಗಳನ್ನು ಚರ್ಚಿಸುತ್ತದೆ. ಬಜೆಟ್ ಲೋಕ ಸಭೆಯಲ್ಲಿ ಸರಳ ಬಹುಮತದಿಂದ ಅಂಗೀಕೃತವಾಗುವುದು ಅಗತ್ಯವಾಗಿರುತ್ತದೆ. ರಾಜ್ಯ ಸಭೆಯ ಟಿಪ್ಪಣಿಗಳು ಬದ್ಧತೆ ಹೊಂದಿರುವುದಿಲ್ಲ. ಭಾರತೀಯ ರೈಲ್ವೆ ಇತರ ಸರ್ಕಾರಿ ಆದಾಯ ಮತ್ತು ವೆಚ್ಚಗಳಿಗಿರುವಂತೆ ಅದೇ ಲೆಕ್ಕಪರಿಶೋಧನಾ ನಿಯಂತ್ರಣಕ್ಕೆ ಒಳಪಟ್ಟಿರುತ್ತದೆ. ನಿರೀಕ್ಷಿತ ಓಡಾಟ ಮತ್ತು ಯೋಜಿತ ಸುಂಕವನ್ನು ಆಧರಿಸಿ, ರೈಲ್ವೆಯ ಬಂಡವಾಳ ಮತ್ತು ಆದಾಯ ವೆಚ್ಚಕ್ಕೆ ಬೇಕಾಗಿರುವ ಸಂಪನ್ಮೂಲಗಳ ಮಟ್ಟವನ್ನು ಲೆಕ್ಕಹಾಕಲಾಗುತ್ತದೆ. ರೈಲ್ವೆ ಆದಾಯ ವೆಚ್ಚವನ್ನು ತಾನೇ ಪೂರೈಸುತ್ತದಾದರೂ, ಬಂಡವಾಳ ವೆಚ್ಚದಲ್ಲಿನ ಕೊರತೆಯನ್ನು ಭಾಗಶಃ (ಭಾರತೀಯ ರೈಲ್ವೆ ಹಣಕಾಸು ನಿಗಮ ಸಂಗ್ರಹಿಸಿದ) ಎರವುಗಳಿಂದ ಮತ್ತು ಉಳಿದದ್ದು ಕೇಂದ್ರ ಸರ್ಕಾರದಿಂದ ಬಜೆಟ್ ಬೆಂಬಲದಿಂದ ಪೂರೈಸಲಾಗುತ್ತದೆ. ಭಾರತೀಯ ರೈಲ್ವೆ ಕೇಂದ್ರ ಸರ್ಕಾರಕ್ಕೆ ಅದರಿಂದ ಹೂಡಲಾದ ಬಂಡವಾಳಕ್ಕೆ ಲಾಭಾಂಶವನ್ನು ಪಾವತಿಸುತ್ತದೆ.

ಪ್ರತ್ಯೇಕತಾ ಸಂಪ್ರದಾಯದ ಅನುಗುಣವಾಗಿ, ರೈಲ್ವೆ ಬಜೆಟ್ಅನ್ನು ಕೇಂದ್ರ ರೈಲ್ವೆ ಸಚಿವರು ಸಂಸತ್ತಿಗೆ, ಸಾಮಾನ್ಯ ಬಜೆಟ್‍ಗೆ ಎರಡು ದಿನ ಮೊದಲು ಪ್ರಸ್ತುತಪಡಿಸುತ್ತಾರೆ. ರೈಲ್ವೆ ಬಜೆಟ್ ಸಂಸತ್ತಿಗೆ ಪ್ರತ್ಯೇಕವಾಗಿ ಪ್ರಸ್ತುತಪಡಿಸಲಾಗುತ್ತದೆಯಾದರೂ, ರೈಲ್ವೆಯ ಆದಾಯ ಮತ್ತು ವೆಚ್ಚಕ್ಕೆ ಸಂಬಂಧಿಸಿದ ಅಂಕಿಅಂಶಗಳನ್ನು ಸಾಮಾನ್ಯ ಬಜೆಟ್‍ನಲ್ಲೂ ತೋರಿಸಲಾಗುತ್ತದೆ, ಏಕೆಂದರೆ ಅವೆರಡೂ ಭಾರತ ಸರ್ಕಾರದ ಒಟ್ಟು ಆದಾಯ ಮತ್ತು ವೆಚ್ಚದ ಅವಿಭಾಜ್ಯ ಅಂಗಗಳಾಗಿವೆ. ಈ ಕಾಗದ ಪತ್ರ ಹಿಂದಿನ ವರ್ಷದ ಅವಧಿಯಲ್ಲಿ ರೈಲ್ವೆಯ ಕಾರ್ಯಾಚರಣೆಗಳ ಅಡಾವೆ ಪತ್ರಿಕೆಯಾಗಿ ಕೆಲಸ ಮಾಡುತ್ತದೆ ಮತ್ತು ಪ್ರಸಕ್ತ ವರ್ಷದ ವಿಸ್ತರಣೆಗೆ ಯೋಜನೆಗಳನ್ನು ಪಟ್ಟಿ ಮಾಡುತ್ತದೆ.

ಕಾರ್ಯನೀತಿಯ ರಚನೆ ಮತ್ತು ರೈಲ್ವೆಯ ಒಟ್ಟಾರೆ ನಿಯಂತ್ರಣ ರೈಲ್ವೆ ಮಂಡಳಿಗೆ ವಹಿಸಲ್ಪಟ್ಟಿರುತ್ತದೆ ಮತ್ತು ಇದರಲ್ಲಿ ಅಧ್ಯಕ್ಷ, ಹಣಕಾಸು ಆಯುಕ್ತ ಮತ್ತು ಸಂಚಾರ, ಇಂಜಿನಿಯರಿಂಗ್, ಮೆಕ್ಯಾನಿಕಲ್, ವಿದ್ಯುತ್ ಮತ್ತು ಸಿಬ್ಬಂದಿ ವಿಷಯಗಳಿಗೆ ಇತರ ಕಾರ್ಯಕಾರಿ ಸದಸ್ಯರು ಇರುತ್ತಾರೆ. ೨೦೦೬ ರ ಬಜೆಟ್ ಪ್ರಕಾರ, ಭಾರತೀಯ ರೈಲ್ವೆ ೫೪,೬೦೦ ಕೋಟಿ ರೂ. ಗಳಿಸಿತು. ಸರಕು ಆದಾಯ ಹಿಂದಿನ ವರ್ಷದಲ್ಲಿನ ೩೦,೪೫೦ ಕೋಟಿ ರೂ. ಯಿಂದ ಶೇಕಡ ೧೦ ರಷ್ಟು ಹೆಚ್ಚಿತು. ಪ್ರಯಾಣಿಕ ಆದಾಯ, ಇತರ ಡಬ್ಬಿ ಆದಾಯ ಮತ್ತು ಬಗೆಬಗೆಯ ಇತರ ಆದಾಯಗಳು ಅನುಕ್ರಮವಾಗಿ ಶೇಕಡ ೭, ಶೇಕಡ ೧೯, ಶೇಕಡ ೫೬ ರಷ್ಟು ಹೆಚ್ಚಿದವು. ಅದರ ವರ್ಷಾಂತ್ಯ ನಿಧಿ ಬಾಕಿ ೧೧,೨೮೦ ಕೋಟಿ ರೂ. ಇರುತ್ತದೆಂದು ನಿರೀಕ್ಷಿಸಲಾಗಿದೆ.

ಸುಮಾರು ಶೇಕಡ ೨೦ ರಷ್ಟು ಪ್ರಯಾಣಿಕ ಆದಾಯವು ಪ್ರಯಾಣಿಕ ವಿಭಾಗದ ಮೇಲ್ವರ್ಗ ವಿಭಾಗಗಳಿಂದ (ಹವಾನಿಯಂತ್ರಿತ ವರ್ಗಗಳು) ಗಳಿಸಲ್ಪಡುತ್ತದೆ. ಒಟ್ಟಾರೆ ಪ್ರಯಾಣಿಕ ಸಂಚಾರ ಹಿಂದಿನ ವರ್ಷದಲ್ಲಿ ಶೇಕಡ ೭.೫ ರಷ್ಟು ಬೆಳೆಯಿತು. ಭಾರತದ ಆರ್ಥಿಕ ವರ್ಷ ೨೦೦೫-೦೬ ರ ಮೊದಲ ಎರಡು ತಿಂಗಳುಗಳಲ್ಲಿ, ರೈಲ್ವೆಯು ಪ್ರಯಾಣಿಕ ಸಂಚಾರದಲ್ಲಿ ಶೇಕಡ ೧೦ ರಷ್ಟು, ಮತ್ತು ಪ್ರಯಾಣಿಕ ಆದಾಯದಲ್ಲಿ ಶೇಕಡ ೧೨ ರಷ್ಟು ಬೆಳವಣಿಗೆ ದಾಖಲಿಸಿತು.

ಭಾರತದಲ್ಲಿ ಇತ್ತೀಚೆಗೆ ಪ್ರವೇಶ ಮಾಡಿರುವ ಕಡಿಮೆ ವೆಚ್ಚದ ವಿಮಾನಯಾನದಿಂದ ಸ್ಪರ್ಧೆ ಭಾರತೀಯ ರೈಲ್ವೆ ಎದುರಿಸುತ್ತಿರುವ ಒಂದು ಹೊಸ ಕಳವಳವಾಗಿದೆ. ಒಂದು ಬೆಲೆ ಕಡಿತ ಕ್ರಮದಲ್ಲಿ, ರೈಲ್ವೆಯು ಅನಗತ್ಯ ನಿಲುಗಡೆಗಳನ್ನು ಕಡಿಮೆಗೊಳಿಸಲು, ಮತ್ತು ಜನಪ್ರಿಯವಲ್ಲದ ಮಾರ್ಗಗಳನ್ನು ತ್ಯಜಿಸಲು ಯೋಜಿಸಿದೆ

ಈ ಮಾಹಿತಿ ನಿಮಗೆ ಕರೆಕ್ಟ್ ಅನಿಸಿದರೆ ನಿಮ್ಮ ಎಲ್ಲಾ ಗ್ರೂಪ್ ಗಳಿಗೆ ಶೇರ್ ಮಾಡಿ ಮತ್ತು ಕಾಮೆಂಟ್ ಮಾಡಿ

ಇದೇ ತರಹದ ಹೆಚ್ಚಿನ ಉದ್ಯೋಗ ಮಾಹಿತಿಯನ್ನು ತಿಳಿದುಕೊಳ್ಳಲು ನಮ್ಮ ವಾಟ್ಸ್ ಆ್ಯಪ್ ಗ್ರೂಪ್ ಸೇರಿಕೊಳ್ಳಿ.ಮತ್ತು ನಮ್ಮ ಮಾಹಿತಿ ನಿಮಗೆ ಇಷ್ಟ ವಾದಲ್ಲಿ (ಲೈಕ್ ಮಾಡಿ, ಕಾಮೆಂಟ್ ಮಾಡಿ, ಶೇರ್ ಮಾಡಿ)ನಮ್ಮ ವಾಟ್ಸ್ ಆ್ಯಪ್ ಗ್ರೂಪ್ ಸೇರಿಕೊಳ್ಳಿಲು ಈ ಕೆಳಗಿನ ಲಿಂಕ್ ಅನ್ನು ಕ್ಲಿಕ್ ಮಾಡಿ

Leave a Reply

Your email address will not be published. Required fields are marked *